ಕೇರೋ, ಹೆನ್ರಿಚ್ 
 	
1834-1910. ಪೋಲೆಂಡಿನ ಪಾeóïನಾನ್ಯ ಪಟ್ಟಣದಲ್ಲಿ ಜನಿಸಿದ ರಸಾಯನವಿಜ್ಞಾನಿ. ಈತನ ತಂದೆ ಒಬ್ಬ ಯೆಹೂದಿ ದಿನಸಿ ವ್ಯಾಪಾರಿ. ಜೀವನವನ್ನು ಸಾಗಿಸುವ ಸಲುವಾಗಿ ಈತ 1842ರಲ್ಲಿ ಬರ್ಲಿನ್ನಿಗೆ ವಲಸೆ ಹೋದ. ಅಲ್ಲಿ ಕೇರೋಗೆ ವೃತ್ತಿಶಿಕ್ಷಣ ದೊರೆಯಿತು. ಅಲ್ಲಿನ ಒಂದು ವ್ಯಾಯಾಮ ಶಾಲೆಯಲ್ಲಿ ಕೆಲಕಾಲ ಇದ್ದ. ಅನಂತರ ಬಟ್ಟೆಗಳಿಗೆ ಬಣ್ಣಹಾಕುವ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡ. ಅಲ್ಲಿ ಈತನಿಗೆ ಬಣ್ಣಹಾಕುವ ಕಲೆಯಲ್ಲಿ ಒಳ್ಳೆಯ ತರಬೇತಿ ದೊರೆಯಿತು. ರಸಾಯನಶಾಸ್ತ್ರದಲ್ಲಿ ಮೊದಲಿನಿಂದಲೂ ಈತನಿಗೆ ಹೆಚ್ಚು ಆಸಕ್ತಿ ಇತ್ತು. ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ರಸಾಯನಶಾಸ್ತ್ರದ ಬಗೆಗಿನ ಉಪನ್ಯಾಸಗಳಿಗೆ ತಪ್ಪದೆ ಹೋಗುತ್ತಿದ್ದ. ಕೆಲವು ವರ್ಷಗಳ ಅನಂತರ ಜರ್ಮನಿಯ ಮುಲ್ ಹೈಮ್ ಪಟ್ಟಣದ ಒಂದು ಕ್ಯಾಲಿಕೋಮುದ್ರಣ ಸಂಸ್ಥೆಯಲ್ಲಿ ಬಣ್ಣಹಾಕುವ ಉದ್ಯೋಗ ಈತನಿಗೆ ಸಿಕ್ಕಿತು(1855). ಅಲ್ಲಿ ರಸಾಯನಶಾಸ್ತ್ರದ ಬಗ್ಗೆ ತನಗಿದ್ದ ಅಪಾರ ಆಸಕ್ತಿಯನ್ನೂ ಜಾಣ್ಮೆಯನ್ನೂ ಪ್ರದರ್ಶಿಸಿ, ಉತ್ಪಾದನೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರೋಪಾಯಗಳನ್ನು ಈತ ಸೂಚಿಸಿದ. ಈತನ ಬುದ್ಧಿಕೌಶಲವನ್ನು ಮೆಚ್ಚಿ ಆ ಸಂಸ್ಥೆಯವರು ಬಣ್ಣಹಾಕುವ ಆಧುನಿಕ ತಂತ್ರಗಳನ್ನು ಅಧ್ಯಯನ ಮಾಡಿಕೊಂಡು ಬರುವ ಸಲುವಾಗಿ ಇವನನ್ನು ಇಂಗ್ಲೆಂಡಿಗೆ ಕಳುಹಿಸಿದರು(1857). ಎರಡು ವರ್ಷಗಳ ತರುವಾಯ ಕೃತಕ ಬಣ್ಣಗಳ ಮೇಲಿನ ಅಧ್ಯಯನಕ್ಕೆ ಈತ ಹೆಚ್ಚು ಗಮನಕೊಡುವ ಸಲುವಾಗಿ ತನ್ನ ಮುಲ್‍ಹೈಮ್ ಕೆಲಸಕ್ಕೆ ರಾಜೀನಾಮೆ ನೀಡಿ ಮತ್ತೆ ಇಂಗ್ಲೆಂಡಿಗೆ ಹಿಂತಿರುಗಿದ. ಇಂಗ್ಲೆಂಡಿನ ಮ್ಯಾಂಚೆಸ್ಟರಿನಲ್ಲಿನ ರಾಬರ್ಟ್ ಡೇಲ್ ಅಂಡ್ ಕಂಪನಿ ಎಂಬ ರಾಸಾಯನಿಕ ಉದ್ಯಮ ಸಂಸ್ಥೆಯಲ್ಲಿ ಸಂಶ್ಲೇಷಣವಿಜ್ಞಾನಿಯ ಕೆಲಸ ಈತನಿಗೆ ದೊರೆಯಿತು.  ಪರ್ಕಿನ್ಸನ ವರ್ಣದ್ರವ್ಯ(ಮೋವ್) ಸಂಶ್ಲೇಷಣೆಗೆ ಸಂಬಂಧಿಸಿದಂತೆ ಒಂದು ಹೊಸ ಸಮರ್ಥ ವಿಧಾನವನ್ನು ಕಂಡುಹಿಡಿದದ್ದರಿಂದ ಇವನಿಗೆ ಆ ಉದ್ಯಮಸಂಸ್ಥೆಯ ಪಾಲುಗಾರಿಕೆಯಲ್ಲಿ ಅವಕಾಶ ಲಭಿಸಿತು. ಈ ವಿಧಾನವನ್ನು ವ್ಯಾವಹಾರಿಕವಾಗಿ ಲಾಭಪ್ರದವನ್ನಾಗಿ ಮಾಡುವುದರಲ್ಲಿ ಮತ್ತು ಹೊಸ ಹೊಸ ಅನಿಲೀನ್ ಬಣ್ಣಗಳ ಸಂಶ್ಲೇಷಣೆ ಹಾಗೂ ಅವುಗಳ ರಚನೆಯ ಬಗ್ಗೆ ಜರ್ಮನಿಯ ರಸಾಯನಶಾಸ್ತ್ರಜ್ಞ ಎ.ಡಬ್ಲ್ಯೂ ಹಾಫ್ ಮನ್ (1818-1892) ನಡೆಸಿದ ಸಂಶೋಧನೆಗಳ ಮೇಲೆ ಅಧ್ಯಯನ ನಡೆಸಿದ ಸಲುವಾಗಿ ಕೇರೋಗೆ ಕೈಗಾರಿಕಾಸಾವಯವ ರಸಾಯನತಜ್ಞನ ಸ್ಥಾನ ಸಿಕ್ಕಿತು.  ಹಾಫ್‍ಮನ್ನನ ಯುವಜನ ವಿದ್ಯಾರ್ಥಿವೃಂದದೊಡನೆ ಹಾಗೂ ಅವರಲ್ಲಿ ಮುಂದೆ ದೊಡ್ಡ ದೊಡ್ಡ ರಸಾಯನತಜ್ಞರಾಗುವಂತಿದ್ದವರೊಡನೆ ಈತ ಕಲೆತು ವೈಜ್ಞಾನಿಕ ಪ್ರಗತಿಯ ಪಥದಲ್ಲಿ ಅನೇಕ ಸಂಶೋಧನಕಾರ್ಯಗಳನ್ನು ನಡೆಸಿದ. ಡೈಆeóÉೂೀ ಸಂಯುಕ್ತಗಳ ಮೇಲೆ ಪೀಟರ್ ಗ್ರೀಸನ ವಿದ್ವತ್ಪೂರಿತ ಅಧ್ಯಯನಗಳನ್ನು ಕುರಿತು ಅಭ್ಯಸಿಸಿ ಬಲು ಪ್ರಯೋಜನಕಾರಿ ಅನಿಲೀನ್ ಬಣ್ಣವಾದ ಇಂಡ್ಯುಲೀನನ್ನು ಕೇರೋ ಕಂಡುಹಿಡಿದ. ಅನಂತರ ಮಾರ್ಷಿಯಸನೊಡಗೂಡಿ (1864-1865) ಬಿಸ್‍ಮಾರ್ಕ್ ಬ್ರೌನ್ ಮತ್ತು ಮಾರ್ಷಿಯಸ್ ಯೆಲ್ಲೋ ಎಂಬ ವರ್ಣದ್ರವ್ಯಗಳ ಲಾಭದಾಯಕ ಸಂಶ್ಲೇಷಣೆಯನ್ನು ರೂಪಿಸಿದ. ಇದಕ್ಕೆ ಮುಂಚೆ ರೋಸನಿಲೀಸ್ ಬಣ್ಣಗಳ ಟ್ರೈಫೀನೈಲ್ ಮೀಥೇನ್ ರಚನೆಯನ್ನು ವಿಶದೀಕರಿಸುವಲ್ಲಿನ ಅಧ್ಯಯನಗಳತ್ತ ಹತ್ತು ವರ್ಷಗಳ ವರೆಗೆ ಕೇರೋನ ಗಮನ ಹರಿದಿತ್ತು.

ಇಂಗ್ಲೆಂಡಿನಲ್ಲಿ ತನಗೊದಗಿದ ಯಶಸ್ಸು ಮತ್ತು ಕೀರ್ತಿಗಳು ಹಾಗೂ ಬ್ರಿಟಿಷ್ ಮಹಿಳೆ ಎಡಿತ್ ಈಟನಳೊಂದಿಗೆ ಜರುಗಿದ ವಿವಾಹ-ಇವು ಯಾವುವೂ ಕೇರೋಗೆ ಆ ಊರಿನಲ್ಲಿ ತನ್ನ ಜೀವನವನ್ನು ಮುಂದುವರಿಸಿಕೊಂಡು ಬರಲು ಸಾಕಷ್ಟು ಪೋಷಕವಾಗಲಿಲ್ಲ. ಜರ್ಮನಿಗೆ ಹಿಂತಿರುಗಿ ಹೈಡಲ್‍ಬರ್ಗಿನಲ್ಲಿ ನೆಲೆಸಿದ (1866). ಅಲ್ಲಿನ ಬುನ್‍ಸೆನ್ ಪ್ರಯೋಗಾಲಯದಲ್ಲಿ ಈತನ ಸಂಶೋಧನಕಾರ್ಯ ಮುಂದುವರಿಯಿತು. ಎರಡು ವರ್ಷಗಳ ಅನಂತರ ಲಡ್‍ವಿಗ್‍ಷಾಪೆನ್‍ನಲ್ಲಿದ್ದ ಒಂದು ಪ್ರಮುಖ ಕೈಗಾರಿಕಾ ಸಂಶೋಧನ ಸಂಸ್ಥೆಯ ನಿರ್ದೇಶನÀ ಹುದ್ದೆ ಈತನಿಗೆ ಲಭಿಸಿತು. ಜರ್ಮನಿಯ ವಿಶ್ವವಿದ್ಯಾಲಯಗಳಲ್ಲದೆ ಇತರೆಡೆಗಳಲ್ಲೂ ಆರೋಮ್ಯಾಟಿಕ್ ರಸಾಯನಶಾಸ್ತ್ರದ ಮೇಲೆ ಸಂಶೋಧನೆ ನಡೆಸುತ್ತಿದ್ದ ಇತರ ಸಂಶೋಧಕರೊಡನೆ ಸೇರೆ ತನ್ನ ಕೆಲಸ ಮುಂದುವರಿಸಿದ. ಅಲಿಜûರಿನ್ ವರ್ಣದ್ರವ್ಯದ ಸಂಶ್ಲೇಷಣೆಯ ಬಗ್ಗೆ ಗ್ರೇಬಿ ಮತ್ತು ಲೀಬರ್‍ಮನ್ನರೆಂಬುವರು ತಮ್ಮ ವಿಧಾನಗಳನ್ನು ಕೇರೋಗೆ ವಿವರಿಸಿದಾಗ ಈತ ವ್ಯವಹಾರದೃಷ್ಟಿಯಿಂದ ಮತ್ತಷ್ಟೂ ಲಾಭತರುವಂಥ ತನ್ನದೇ ಆದ ವಿಧಾನವನ್ನು ಅವರಿಗೆ ತಿಳಿಯಪಡಿಸಿದ. ಬೇಯರ್ ಫ್ಲೂರಸೀನನ್ನು ಬ್ರೋಮಿನೀಕರಿಸಿ (ಬ್ರೋಮಿನೇಟೆಡ್) ಕೆಂಪುಬಣ್ಣದ ಈಯೊಸಿನ್ ಎಂಬ ಪ್ರತಿದೀಪ್ತವಸ್ತುವನ್ನು(ಫ್ಲೂರೊಸೆಂಟ್) ತಯಾರಿಸಿದ. ಬೇಯರ್ ಒಡಗೂಡಿ ಅಮೀನುಗಳ ಮೇಲೆ ಈತನ ಸಂಶೋಧನೆ ಮುಂದುವರಿಯಿತು. ಗ್ರೀಸ್, ಆಟೋ ಮತ್ತು ವಿಟ್ಟ್ ಮುಂತಾದ ವಿಜ್ಞಾನಿಗಳಿಂದಾಗಿ 1870ರ ದಶಕದ ಮಧ್ಯಭಾಗದಲ್ಲಿ ಆeóÉೂೀ ಬಣ್ಣಗಳ ಒಂದು ದೀರ್ಘ ಸರಣಿಯೇ ಉದ್ಭವವಾಯಿತು. ಇವುಗಳಲ್ಲಿ ಕೇರೋನ ಪಾತ್ರ ಮಹತ್ತರವಾದದ್ದು. ಕ್ರೈಸಾಯ್ಡೀನ್ ಆರೆಂಜ್ ಮತ್ತು ಗಾಢಕೆಂಪು (ಫಾಸ್ಟ್‍ರೆಡ್) ಬಣ್ಣಗಳ ಉತ್ಪಾದನೆಗೆ ಈತ ಬಹುವಾಗಿ ನೆರವಾದ. ಬೇಯರ್ ಮತ್ತು ಫಾರ್ಬ್‍ಮ್ಸ್ ಹೊಚೆಸ್ಟ್ ಸಂಸ್ಥೆಗಳೊಡನೆ ಸಂಪರ್ಕವಿಟ್ಟುಕೊಂಡು ಇಂಡಿಗೋದ ಲಾಭಪ್ರದ ಸಂಶ್ಲೇಷಣೆಗೆ ಪ್ರಯತ್ನಿಸಿದನಾದರೂ(1880) ಅದು ಅಷ್ಟಾಗಿ ಫಲಪ್ರದವಾಗಲಿಲ್ಲ. ಸಂಶೋಧನ ವಿಭಾಗದ ನಿರ್ದೇಶಕನ ಹುದ್ದೆಗೆ ಕೇರೋ ರಾಜೀನಾಮೆ ಇತ್ತಮೇಲೆ(1889) ಈತನ ಅನಂತರದ ನಿರ್ದೇಶಕ ಹೆನ್ರಿಚ್ ಬ್ರೂನ್ಕ್‍ನ ನೇತೃತ್ವದಲ್ಲಿ ಬಿ.ಎ.ಎಸ್.ಎಫ್. ನ ರಸಾಯನತಜ್ಞರು ಇಂಡಿಗೋ ಸಂಶ್ಲೇಷಣೆಯ ಯೋಜನೆಯನ್ನು ಮುಂದುವರಿಸಿದರು. 1897ರಲ್ಲಿ ಜಯ ಲಭಿಸಿತು. ಕೇರೋ ತನ್ನ ಕೊನೆಯ ವರ್ಷಗಳಲ್ಲಿ ರೂಪಿಸಿದ ವರ್ಣಸಂಯುಕ್ತಗಳಲ್ಲಿ ನೆಫ್ತಾಲ್‍ಯೆಲ್ಲೋ (1879), ಪರ್‍ಸಲ್ಫ್ಯೂರಿಕ್ ಆಮ್ಲ(1898) (ನೋಡಿ- ಕೇರೋ-ಆಮ್ಲ) ಮುಖ್ಯವಾದವು.

1883ರ ಹೊತ್ತಿಗೆ ಜರ್ಮನಿಯ ಒಂದು ರಾಸಾಯನಿಕ ಕೈಗಾರಿಕೋದ್ಯಮದ ಮುಖ್ಯವಕ್ತಾರನಾಗಿ ರಸಾಯನವಿಜ್ಞಾನದ ಆವಿಷ್ಕಾರಗಳ ರಕ್ಷಣೆಗೆ ಸಂಬಂಧಿಸಿದಂತೆ ಏಕಸ್ವಾಮ್ಯ ನಿಯಮಗಳನ್ನೂ ಉಲ್ಲಂಘನ ಕ್ರಮಗಳನ್ನೂ ಕೇರೋ ರೂಪಿಸಿದ. ತನ್ನ ಜೀವಿತಕಾಲದಲ್ಲೇ ಬಣ್ಣದ ಕೈಗಾರಿಕೆಯಲ್ಲಿ ಆದಂಥ ಪ್ರಗತಿಯ ಚರಿತ್ರೆ ಬಗ್ಗೆ ತಾನೇ ಬರೆದಂಥ ಅನೇಕ ಲೇಖನಗಳಲ್ಲಿ ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾನೆ. 										

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ